Sunday, March 18, 2007

ನೀವೂ ಕೈಜೋಡಿಸುತ್ತೀರಾ?

೨ ವರ್ಷಗಳ ಹಿಂದೆ ಉತ್ತರಕನ್ನಡದ ಅನುಶಾ ಎನ್ನುವ ಪುಟ್ಟಹುಡುಗಿಯ ಹೃದಯಚಿಕಿತ್ಸೆಗೆ ಸಹಾಯ ಮಾಡಿದ್ದೆವು. ಸುಮಾರು ಒಂದು ಲಕ್ಷ ರೂಪಾಯಿಯ ಮೊತ್ತವನ್ನು ಸಂಗ್ರಹಿಸಿದ್ದೆವು. ಆಸ್ಪತ್ರೆಗೆ ಅನುಶಾಳನ್ನು ಸೇರಿಸುವುದರಿಂದ ಹಿಡಿದು ಶಸ್ತ್ರಚಿಕಿತ್ಸೆಯ ಅಂತ್ಯದವರೆಗೂ ನಮ್ಮ ತಂಡ ಸಹಕಾರ ನೀಡಿತ್ತು. ಅನುಶಾ ಈಗ ನರ್ಸಿಂಗ್ ಓದುತ್ತಿದ್ದಾಳೆ.ಈಗ ೧೮ರ ಹರೆಯದ ಗುರುರಾಜನ ಸರದಿ.

ಗುರುರಾಜ್ ತುಮಕೂರು ಜಿಲ್ಲೆಯ, ತಿಪಟೂರು ತಾಲೂಕಿನ ಗೊರಗೊಂಡನಹಳ್ಳಿಯವನು. ತಂದೆ, ತಾಯಿ ದಿನಗೂಲಿ ನೌಕರರು. ಒಬ್ಬ ತಮ್ಮ ಮತ್ತು ಒಬ್ಬಳು ತಂಗಿ. ಗುರುರಾಜನಿಗೆ ಹೃದಯದ ತೊಂದರೆ ಕಾಣಿಸಿಕೊಂಡಿದ್ದು ತುರ್ತು ಹೃದಯಚಿಕಿತ್ಸೆಯ ಅಗತ್ಯವಿದೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಚಿಕಿತ್ಸೆಯ ಒಟ್ಟು ಮೊತ್ತ - ೮೩,೦೦೦ ರೂ.
ಆಸ್ಪತ್ರೆ + ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ - ೨೦,೦೦೦ - ೨೫,೦೦೦ ರೂ
ನಮ್ಮ ಸ್ನೇಹಿತರಿಂದ - ೨೦,೦೦೦ ರೂಇನ್ನೂ ಬೇಕಿರುವ ಮೊತ್ತ - ೩೮,೦೦೦ - ೪೩,೦೦೦ರೂ
ಸಂಗ್ರಹಿತ ಮೊತ್ತವನ್ನು ನೇರವಾಗಿ ಆಸ್ಪತ್ರೆಯ ಖರ್ಚುವೆಚ್ಚಕ್ಕೆ ನೀಡಲಾಗುವುದು. ಮಾರ್ಚ್ ೧೩ರ ಒಳಗೆ ಈ ಮೊತ್ತವನ್ನು ಸಂಗ್ರಹಿಸಬೇಕೆನ್ನುವ ಗುರಿ ಹೊಂದಿದ್ದೇವೆ. ನೀವು ಕೈಜೋಡಿಸುತ್ತೀರಾ?

ನಮ್ಮ ಸಮಾಜದಲ್ಲಿ ಯಾತನಾಮಯ ಬದುಕುಗಳಿಗೆ ಕೊರತೆಯಿಲ್ಲ. ಅವೆಲ್ಲವನ್ನೂ ಪರಿಹರಿಸುತ್ತೇವೆ ಎನ್ನುವುದು ಅಪ್ರಾಯೋಗಿಕ ಎನ್ನಿಸಬಹುದು. ಆದರೆ ಪ್ರಾಮಾಣಿಕ ಪ್ರಯತ್ನದಿಂದ ನಮ್ಮ ಸುತ್ತಲ ಪರಿಸರದಲ್ಲಿ ಇತ್ಯಾತ್ಮಕವಾದ ಬದಲಾವಣೆಯೊಂದನ್ನು ತರುವ ಅವಕಾಶ ನಮಗಿದೆ. ನಮ್ಮ ಒಂದು ಪುಟ್ಟ ಪ್ರಯತ್ನ ಇನ್ನೊಂದು ಜೀವವನ್ನೇ ಉಳಿಸಬಹುದು. ನಮ್ಮ ಒಂದು ಪುಟ್ಟ ಕೊಡುಗೆ ಹೆತ್ತಕರುಳಿನ ಸಂಕಟವನ್ನು, ಹಣ ಹೊಂದಿಸಲಾಗದ ಅಸಹಾಯಕತೆಯನ್ನು ದೂರ ಮಾಡೀತು.....

No comments: